وَلَوْ يُؤَاخِذُ ٱللَّهُ ٱلنَّاسَ بِظُلْمِهِم مَّا تَرَكَ عَلَيْهَا مِن دَآبَّةٍ وَلَٰكِن يُؤَخِّرُهُمْ إِلَىٰٓ أَجَلٍ مُّسَمًّى فَإِذَا جَآءَ أَجَلُهُمْ لَا يَسْتَـْٔخِرُونَ سَاعَةً وَلَا يَسْتَقْدِمُونَ
Kannada Translation - Hamza Buturಅಲ್ಲಾಹು ಮನುಷ್ಯರನ್ನು ಅವರು ಮಾಡಿದ ಅಕ್ರಮಗಳ ಕಾರಣದಿಂದ ಹಿಡಿದು ಶಿಕ್ಷಿಸುವುದಾದರೆ, ಭೂಮಿಯಲ್ಲಿ ಒಂದೇ ಒಂದು ಜೀವಿಯೂ ಉಳಿಯುತ್ತಿರಲಿಲ್ಲ. ಆದರೆ ಅವನು ಒಂದು ನಿಗದಿತ ಅವಧಿಯವರೆಗೆ ಅವರಿಗೆ ಕಾಲಾವಕಾಶ ನೀಡುತ್ತಾನೆ. ಅವರ ಅವಧಿಯೇನಾದರೂ ಬಂದುಬಿಟ್ಟರೆ ಆ ಅವಧಿಯಿಂದ ಒಂದು ಕ್ಷಣ ಹಿಂದೆ ಉಳಿಯಲು ಅಥವಾ ಒಂದು ಕ್ಷಣ ಮುಂದಕ್ಕೆ ಹೋಗಲು ಅವರಿಗೆ ಸಾಧ್ಯವಿಲ್ಲ.