وَلَمَّا دَخَلُوا۟ مِنْ حَيْثُ أَمَرَهُمْ أَبُوهُم مَّا كَانَ يُغْنِى عَنْهُم مِّنَ ٱللَّهِ مِن شَىْءٍ إِلَّا حَاجَةً فِى نَفْسِ يَعْقُوبَ قَضَىٰهَا وَإِنَّهُۥ لَذُو عِلْمٍ لِّمَا عَلَّمْنَٰهُ وَلَٰكِنَّ أَكْثَرَ ٱلنَّاسِ لَا يَعْلَمُونَ
Kannada Translation - Hamza Buturಅವರ ತಂದೆ ಆದೇಶಿಸಿದ ಕಡೆಯಿಂದಲೇ ಅವರು ಪ್ರವೇಶ ಮಾಡಿದಾಗ, ಅಲ್ಲಾಹು ತೀರ್ಮಾನಿಸಿದ ಯಾವುದನ್ನೂ ಅವರಿಂದ ತಡೆಗಟ್ಟಲು ಅವರಿಗೆ (ಯಾಕೂಬರಿಗೆ) ಸಾಧ್ಯವಾಗಲಿಲ್ಲ. ಯಾಕೂಬರು ತಮ್ಮ ಮನಸ್ಸಿನಲ್ಲಿದ್ದ ಒಂದು ಆಸೆಯನ್ನು ನೆರವೇರಿಸಿದರು ಎಂದು ಮಾತ್ರ. ನಿಶ್ಚಯವಾಗಿಯೂ ಅವರು ನಾವು ಅವರಿಗೆ ಕಲಿಸಿಕೊಟ್ಟ ಜ್ಞಾನದಿಂದಾಗಿ ಒಬ್ಬ ವಿದ್ವಾಂಸರಾಗಿದ್ದಾರೆ. ಆದರೆ ಜನರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.