وَجَآءَهُۥ قَوْمُهُۥ يُهْرَعُونَ إِلَيْهِ وَمِن قَبْلُ كَانُوا۟ يَعْمَلُونَ ٱلسَّيِّـَٔاتِ قَالَ يَٰقَوْمِ هَٰٓؤُلَآءِ بَنَاتِى هُنَّ أَطْهَرُ لَكُمْ فَٱتَّقُوا۟ ٱللَّهَ وَلَا تُخْزُونِ فِى ضَيْفِىٓ أَلَيْسَ مِنكُمْ رَجُلٌ رَّشِيدٌ
Kannada Translation - Hamza Buturಅವರು ಜನರು ಅವರ ಬಳಿಗೆ ಓಡೋಡಿ ಬಂದರು. ಅವರು ಬಹಳ ಹಿಂದಿನಿಂದಲೇ ಕೆಟ್ಟ ಕೃತ್ಯಗಳನ್ನು ಮಾಡುತ್ತಾ ಬಂದಿದ್ದರು. ಲೂತ್ ಹೇಳಿದರು: “ಓ ನನ್ನ ಜನರೇ! ಇಗೋ ಇವರು ನನ್ನ ಹೆಣ್ಣುಮಕ್ಕಳು. ಇವರು ನಿಮಗೆ ಹೆಚ್ಚು ಪರಿಶುದ್ಧರು. ಅಲ್ಲಾಹನನ್ನು ಭಯಪಡಿರಿ. ನನ್ನ ಅತಿಥಿಗಳ ವಿಷಯದಲ್ಲಿ ನನ್ನನ್ನು ಅವಮಾನ ಮಾಡಬೇಡಿ. ನಿಮ್ಮಲ್ಲಿ ಕನಿಷ್ಠ ಒಬ್ಬ ನೀತಿವಂತ ವ್ಯಕ್ತಿಯೂ ಇಲ್ಲವೇ?”