بِسْمِ ٱللَّهِ ٱلرَّحْمَٰنِ ٱلرَّحِيمِ يَٰٓأَيُّهَا ٱلَّذِينَ ءَامَنُوا۟ لَا تَتَّخِذُوا۟ عَدُوِّى وَعَدُوَّكُمْ أَوْلِيَآءَ تُلْقُونَ إِلَيْهِم بِٱلْمَوَدَّةِ وَقَدْ كَفَرُوا۟ بِمَا جَآءَكُم مِّنَ ٱلْحَقِّ يُخْرِجُونَ ٱلرَّسُولَ وَإِيَّاكُمْ أَن تُؤْمِنُوا۟ بِٱللَّهِ رَبِّكُمْ إِن كُنتُمْ خَرَجْتُمْ جِهَٰدًا فِى سَبِيلِى وَٱبْتِغَآءَ مَرْضَاتِى تُسِرُّونَ إِلَيْهِم بِٱلْمَوَدَّةِ وَأَنَا۠ أَعْلَمُ بِمَآ أَخْفَيْتُمْ وَمَآ أَعْلَنتُمْ وَمَن يَفْعَلْهُ مِنكُمْ فَقَدْ ضَلَّ سَوَآءَ ٱلسَّبِيلِ
Kannada Translation - Hamza Buturಓ ಸತ್ಯವಿಶ್ವಾಸಿಗಳೇ! ನನ್ನ ಮತ್ತು ನಿಮ್ಮ ವೈರಿಗಳನ್ನು ಮಿತ್ರರನ್ನಾಗಿ ಮಾಡಿಕೊಳ್ಳಬೇಡಿ. ನೀವು ಅವರೊಡನೆ ಮೈತ್ರಿ ಮಾಡಿಕೊಂಡು ಅವರಿಗೆ ಸಂದೇಶವನ್ನು ಕಳುಹಿಸುತ್ತೀರಿ. ನಿಮ್ಮ ಬಳಿಗೆ ಬಂದಿರುವ ಸತ್ಯವನ್ನು ಅವರು ನಿಷೇಧಿಸಿದ್ದಾರೆ. ನೀವು ನಿಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ವಿಶ್ವಾಸವಿಡುತ್ತೀರಿ ಎಂಬ ಕಾರಣದಿಂದ ಅವರು ಸಂದೇಶವಾಹಕರನ್ನು ಮತ್ತು ನಿಮ್ಮನ್ನು ಊರಿನಿಂದ ಗಡೀಪಾರು ಮಾಡುತ್ತಿದ್ದಾರೆ. ನೀವು ನನ್ನ ಮಾರ್ಗದಲ್ಲಿ ಯುದ್ಧ ಮಾಡಲು ಹೊರಟಿದ್ದರೆ ಮತ್ತು ನನ್ನ ಸಂಪ್ರೀತಿಯನ್ನು ಪಡೆಯುವುದು ನಿಮ್ಮ ಉದ್ದೇಶವಾಗಿದ್ದರೆ (ಅವರೊಂದಿಗೆ ಮೈತ್ರಿ ಮಾಡಿಕೊಳ್ಳಬೇಡಿ). ನೀವು ರಹಸ್ಯವಾಗಿ ಅವರಿಗೆ ಪ್ರೀತಿಯ ಸಂದೇಶವನ್ನು ಕಳುಹಿಸುತ್ತಿದ್ದೀರಿ. ನೀವು ಮುಚ್ಚಿಡುವುದನ್ನು ಮತ್ತು ಬಹಿರಂಗಪಡಿಸುವುದನ್ನು ನಾನು ಬಹಳ ಚೆನ್ನಾಗಿ ತಿಳಿದಿದ್ದೇನೆ. ನಿಮ್ಮಲ್ಲಿ ಯಾರು ಹೀಗೆ ಮಾಡುತ್ತಾನೋ ಅವನು ನೇರ ಮಾರ್ಗದಿಂದ ತಪ್ಪಿಹೋಗಿದ್ದಾನೆ.[1]