سَابِقُوٓا۟ إِلَىٰ مَغْفِرَةٍ مِّن رَّبِّكُمْ وَجَنَّةٍ عَرْضُهَا كَعَرْضِ ٱلسَّمَآءِ وَٱلْأَرْضِ أُعِدَّتْ لِلَّذِينَ ءَامَنُوا۟ بِٱللَّهِ وَرُسُلِهِۦ ذَٰلِكَ فَضْلُ ٱللَّهِ يُؤْتِيهِ مَن يَشَآءُ وَٱللَّهُ ذُو ٱلْفَضْلِ ٱلْعَظِيمِ
Kannada Translation - Hamza Buturನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಕ್ಷಮೆಗಾಗಿ ಮತ್ತು ಭೂಮ್ಯಾಕಾಶಗಳಷ್ಟು ವಿಸ್ತಾರವಾದ ಸ್ವರ್ಗಕ್ಕಾಗಿ ಧಾವಂತದಿಂದ ಬನ್ನಿರಿ. ಅಲ್ಲಾಹು ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಟ್ಟವರಿಗೋಸ್ಕರ ಅದನ್ನು ಸಿದ್ಧಗೊಳಿಸಲಾಗಿದೆ. ಅದು ಅಲ್ಲಾಹನ ಔದಾರ್ಯವಾಗಿದ್ದು ಅವನು ಇಚ್ಛಿಸುವವರಿಗೆ ಅದನ್ನು ನೀಡುತ್ತಾನೆ. ಅಲ್ಲಾಹು ಮಹಾ ಔದಾರ್ಯವಂತನಾಗಿದ್ದಾನೆ.